ಈ ತಪ್ಪುಗಳನ್ನ ಮಾಡಿದರೆ ಗಲ್ಲು ಹಾಗೂ ಕಠಿಣ ಜೈಲು ಶಿಕ್ಷೆ.!
ಕೇಂದ್ರದಿಂದ ಮಹತ್ತರ ಬದಲಾವಣೆ

ನಮ್ಮ ಭಾರತದಲ್ಲಿ ದೇಶದಲ್ಲಿ ಈಗಾಗಲೇ ಹಲವು ನಿಯಮಗಳು ಮತ್ತು ಶಿಕ್ಷೆಗಳು ಜಾರಿಯಲ್ಲಿ ಇದ್ದು ಜನರು ಎಷ್ಟೇ ನಿಯಮವನ್ನ ಜಾರಿಗೆ ತಂದರೂ ಕೂಡ ಅದನ್ನ ಲೆಕ್ಕಿಸದ ಜನರು ತಪ್ಪುಗಳ ಮೇಲೆ ತಪ್ಪುಗಳನ್ನ ಮಾಡುತ್ತಿರುವುದನ್ನ ನಾವು ಗಮನಿಸಬಹುದು.

ಸದ್ಯ ದೇಶದಲ್ಲಿ ಕೆಲವು ನಿಯಮವನ್ನ ಬದಲಾಯಿಸಲು ಈಗ ಕೇಂದ್ರ ಸರ್ಕಾರ ಮುಂದಾಗಿದ್ದು ಇದು ಜನರ ಖುಷಿಗೆ ಕೂಡ ಕಾರಣವಾಗಿರುತ್ತದೆ. ಹೌದು ದೇಶದ ಹಲವು ನಿಯಮಗಳನ್ನ ಈಗ ಕೇಂದ್ರ ಸರ್ಕಾರದ ಬದಲಾಯಿಸಿದ್ದು ಈಗ ಕೆಲವು ತಪ್ಪುಗಳಿಗೆ ನೀಡಲಾಗುವ ಶಿಕ್ಷೆಯ ಪ್ರಮಾಣವನ್ನ ಕೂಡ ಬದಲಾಯಿಸಲಾಗಿದೆ.

ಕ್ರಿಮಿನಲ್ ಕಾನೂನುಗಳಲ್ಲಿ ಬದಲಾವಣೆ ಮಾಡಿದ ಸರ್ಕಾರ

ಹೌದು ದೇಶದಲ್ಲಿ ಪ್ರಸ್ತುತ ದಿನಗಳಲ್ಲಿ ಸಾಕಷ್ಟು ಕ್ರಿಮಿನಲ್ ಪ್ರಕಾರಣಗಳು ಕೇಳಿಬರುತ್ತಿದ್ದು ಅದನ್ನ ತಡೆಯುವ ನಿಟ್ಟಿನಲ್ಲಿ ಈಗ ಕೇಂದ್ರ ಸರ್ಕಾರ ನಿಯಮದಲ್ಲಿ ದೊಡ್ಡ ಬದಲಾವಣೆಯನ್ನ ಮಾಡಿದ್ದು ಇದು ಜನರ ಸಂತಸಕ್ಕೆ ಕಾರಣವಾಗಿದೆ. ಜನರು ಈ ಶಿಕ್ಷೆಯನ್ನ ಕೇಳಿದರೆ ಮುಂದಿನ ದಿನಗಳಲ್ಲಿ ತಪ್ಪು ಮಾಡುವ ಮುನ್ನ ನೂರು ಬಾರಿ ಯೋಜನೆಯನ್ನ ಮಾಡಬೇಕಾಗುತ್ತದೆ.

ಯಾವ ತಪ್ಪುಗಳಿಗೆ ಏನು ಶಿಕ್ಷೆ

ಹೌದು ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯಾಚಾರದ ಪ್ರಕರಣಗಳು ಸಾಕಷ್ಟು ಆಗುತ್ತಿರುವ ಹಿನ್ನಲೆಯಲ್ಲಿ ಅದಕ್ಕೆ ನೀಡಲಾಗುವ ಶಿಕ್ಷೆಯನ್ನ ಬದಲಾಯಿಸಲಾಗಿದೆ. ಹೌದು ಅಪ್ರಾಪ್ತರ ಮೇಲೆ ಅತ್ಯಾಚಾರ ಮಾಡುವ ಆರೋಪಿಗಳಿಗೆ ಇನ್ನುಮುಂದೆ ಗಲ್ಲುಶಿಕ್ಷೆ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಮತ್ತು ಈ ಮಸೂದೆಯನ್ನ ಲೋಕಭೆಯಲ್ಲಿ ಅಂಗೀಕಾರ ಕೂಡ ಮಾಡಲಾಗಿದೆ. ದೇಶದಲ್ಲಿ ಹಿಂದೆ ಅತ್ಯಾಚಾರಿಗಳಿಗೆ 20 ವರ್ಷ ಜೈಲು ಶಿಕ್ಷೆ ವಿಡಿಯಲಾಗುತ್ತಿತ್ತು, ಆದರೆ ಈಗ ಆ ನಿಯಮದಲ್ಲಿ ಬದಲಾವಣೆ ಮಾಡಲಾಗಿದ್ದು ಅದನ್ನ ಗಲ್ಲು ಶಿಕ್ಷೆಗೆ ಬದಲಾಯಿಸಲಾಗಿದೆ.

ಈ ತಪ್ಪು ಮಾಡಿದರೆ 7 ವರ್ಷ ಜೈಲು

ಹೌದು ಜನರು ಗುಂಪುಗೂಡಿ ಹತ್ಯೆಯನ್ನ ಮಾಡಿದರೆ ಅವರಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಲು ಲೋಕಸಭೆಯಲ್ಲಿ ಅಂಗೀಕಾರ ಮಾಡಲಾಗಿದೆ. ಅದೇ ರೀತಿಯಲ್ಲಿ ಸರ್ಕಾರದ ವಿರುದ್ಧ ಆಧಾರ ರಹಿತ ಆರೋಪವನ್ನ ಮಾಡಿದರೆ ಅವರಿಗೂ ಕೂಡ ಶಿಕ್ಷೆಯನ್ನ ಕೊಡಲು ಲೋಕಸಭೆಯಲ್ಲಿ ತೀರ್ಮಾನವನ್ನ ಕೈಗೊಳ್ಳಲಾಗಿದೆ.

ಇನ್ನು ಅದರ ಜೊತೆಗೆ ಬ್ರಿಟಿಷರ ಕಾಲದ ಮೂರೂ ಮಸೂದೆಗಳ ಹೆಸರನ್ನ ಕೂಡ ಲೋಕಸಭೆಯಲ್ಲಿ ಬದಲಾಯಿಸಲಾಗಿದೆ. ಇನ್ನು ಶಿಕ್ಷೆಗಳನ್ನ ಬದಲಾಯಿಸುವ ಕೇಂದ್ರ ಸರ್ಕಾರದ ಘೋಷಣೆ ಜನರ ಮೆಚ್ಚುಗೆಗೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ದೇಶದಲ್ಲಿ ಅತ್ಯಾಚಾರಿಗಳ ಸಂಖ್ಯೆ ಹೆಚ್ಚಾಗಿದ್ದು ಅಂತವರಿಗೆ ಇನ್ನುಮುಂದೆ ಗಲ್ಲು ಶಿಕ್ಷೆ ಖಚಿತ ಎಂದು ಹೇಳಬಹುದು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!