ಬಾಲಕನ ಮೇಲೆ ಪಿಟ್​ಬುಲ್​ ದಾಳಿ, ಸಹಾಯಕ್ಕೆ ಧಾವಿಸಿದ ಬೀದಿ ನಾಯಿಗಳು
ಬಾಲಕನ ಮೇಲೆ ಪಿಟ್​ಬುಲ್​ ದಾಳಿ, ಸಹಾಯಕ್ಕೆ ಧಾವಿಸಿದ ಬೀದಿ ನಾಯಿಗಳು

ಕಳೆದ ಕೆಲವು ತಿಂಗಳುಗಳಿಂದ ಸಾಕು ನಾಯಿಗಳ ದಾಳಿ ಹೆಚ್ಚಾಗಿದೆ. ಸಮಾಜದಲ್ಲಿ ನಾಯಿಯ ಬಗೆಗಿನ ಭಯವೂ ಕೂಡ ಹೆಚ್ಚಿದೆ. ಗಾಜಿಯಾಬಾದ್​ನಲ್ಲಿ ಪಿಟ್​ಬುಲ್​ ನಾಯಿಯೊಂದು ಬಾಲಕನ ಮೇಲೆ ದಾಳಿ ನಡೆಸಿದೆ, ಆತನನ್ನು ರಕ್ಷಿಸಲು ಬೀದಿ ನಾಯಿಗಳು ಓಡಿಬಂದಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮನೆಯ ಗೇಟ್​ ಬಳಿ ಬಾಲಕನ ಮೇಲೆ ನಾಯಿ ದಾಳಿ ನಡೆಸಿದೆ. ಬಾಲಕ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾನೆ. ಅಲ್ಲಿ ಜನರು ನೋಡುತ್ತಿದ್ದರೂ ಭಯದಿಂದಾಗಿ ತಪ್ಪಿಸಲು ಯಾರೂ ಬಂದಿಲ್ಲ. ಮೇಲಿನ ಮನೆಯವರು ನಾಯಿ ಮೇಲೆ ನೀರು ಸುರಿದಿದ್ದಾರೆ ಆದರೂ ಆ ನಾಯಿ ಶಾಂತವಾಗಲಿಲ್ಲ. 

ಬಳಿಕ ಹೇಗೋ ಬಾಲಕ ಪಕ್ಕದ ಮನೆಯ ಗೇಟ್​ ತೆಗೆದು ಒಳಗೆ ಹೋಗಲು ಯತ್ನಿಸಿದ್ದಾನೆ ಆಗ ನಾಯಿ ಮತ್ತೆ ಅಟ್ಯಾಕ್ ಮಾಡಿದೆ. ಆಗ ಬೀದಿ ನಾಯಿಗಳು ತಕ್ಷಣ ಓಡಿ ಬಂದು ಪಿಟ್​ಬುಲ್​ನ್ನು ಕಚ್ಚಿ ಎಳೆದು ಹೊರ ಹಾಕಿವೆ ಆಗ ಬಾಲಕ ಸುಲಭವಾಗಿ ತಪ್ಪಿಸಿಕೊಂಡು ಮನೆಯ ಒಳಗೆ ಹೋಗಿದ್ದಾನೆ.

ನಾಯಿಯನ್ನು ಮಹಾನಗರ ಪಾಲಿಕೆ ವಶಕ್ಕೆ ಪಡೆದಿದೆ. ಇದೀಗ ಬಾಲಕ ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪಿಟ್‌ಬುಲ್ ಟೆರಿಯರ್, ಅಮೇರಿಕನ್ ಬುಲ್‌ಡಾಗ್ಸ್, ರೊಟ್‌ವೀಲರ್ಸ್ ಮತ್ತು ಮ್ಯಾಸ್ಟಿಫ್ಸ್ ಸೇರಿದಂತೆ 23 ತಳಿಗಳ ಅಪಾಯಕಾರಿ ನಾಯಿಗಳ ಮಾರಾಟ ಮತ್ತು ಸಂತಾನೋತ್ಪತ್ತಿಯನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ನಿರ್ದೇಶನ ನೀಡಿದೆ.

 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!