ಪುತ್ತೂರು: "ಸಲೀಂ"ನನ್ನು ಮದುವೆಯಾದ "ಅಕ್ಷತಾ"
ವ್ಯವಸ್ಥಿತ "ಲವ್ ಜಿಹಾದ್"; ವ್ಯಾಪಕ ಆಕ್ರೋಶ.!

ದಿನದಿಂದ ದಿನಕ್ಕೆ ಲವ್‌ ಜಿಹಾದ್‌ ಪ್ರಕರಣಗಳು ಹೆಚ್ಚಾಗಿ ವರಿದಿಯಾಗುತ್ತಿದ್ದು, ಲವ್‌ ಜಿಹಾದ್‌ ಗೆ ಹಿಂದು ಯುವತಿಯರು ಬಲಿಯಾಗುತ್ತಿದ್ದಾರೆ. ಇದರ ವಿರುದ್ಧ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗುತ್ತಿದೆ. ಈದೀಗ ಪುತ್ತೂರಿನಲ್ಲಿ ಹಿಂದು ಯುವತಿ ಮುಸ್ಲಿಂ ಯುವಕನನ್ನು ಮದುವೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿವಾಹ ನೋಂದಣಿ ವೈರಲ್‌ ಆಗಿದೆ.  

ಪುತ್ತೂರಿನ ಹಿಂದು ಯುವತಿ ಬೆಂಗಳೂರಿನ ಮುಸ್ಲಿಂ ಯುವಕನನ್ನು ಮದುವೆಯಾದ ಘಟನೆ ನಡೆದಿದ್ದು ಮತ್ತೊಂದು ವ್ಯವಸ್ಥಿತ ಲವ್ ಜಿಹಾದ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ಪುತ್ತೂರಿನ ದರ್ಬೆ ನಿವಾಸಿ ಅಕ್ಷತಾ (34) ಎಂಬಾಕೆ ಬೆಂಗಳೂರಿನ ನ್ಯಾಣಪ್ಪನಹಳ್ಳಿ ನಿವಾಸಿ ಶೇಕ್ ಮಹಮ್ಮದ್ ಸಲೀಂ (44) ಎಂಬಾತನನ್ನು ನವೆಂಬರ್ 9ರಂದು ಮದುವೆಯಾಗಿದ್ದಾರೆ. ಈ ಬಗ್ಗೆ ಬೊಮ್ಮನಹಳ್ಳಿ ರಿಜಿಸ್ಟಾ‌‍ ಕೇಂದ್ರದಲ್ಲಿ ವಿವಾಹ ನೋಂದಣಿಯಾಗಿದೆ. ಸದ್ಯ ಈ ನೋಟಿಸ್ ಎಲ್ಲೆಡೆ ಹರಿದಾಡುತ್ತಿದ್ದು ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಹಲವಾರು ದಿನಗಳಿಂದ ಅನೇಕ ಹಿಂದು ಯುವತಿಯರನ್ನು ಲವ್‌ ಜಿಹಾದ್‌ ಹೆಸರಿನಲ್ಲಿ ಬಲಿ ನೀಡಲಾಗಿದೆ. ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದರು ಯುವತಿಯರಿಗೆ ಬುದ್ಧಿಬಂದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಅಭಿಪ್ರಾಯಪಟ್ಟಿದ್ದಾರೆ. 

ಇನ್ನೂ ಈ ಪುತ್ತೂರಿನ ಯುವತಿ ಲವ್‌ ಜಿಹಾದ್‌ ಗೆ ಬಲಿಯಾಗಿದ್ದಾಳ.! ಇದರ ಅಸಲಿ ವಿಷಯ ತಿಳಿದುಬಂದಿಲ್ಲ. ಘಟನೆ ಬಗ್ಗೆ ಹಿಂದೂ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಇದೊಂದು ವ್ಯವಸ್ಥಿತ 'ಲವ್ ಜಿಹಾದ್' ಎಂದು ಆರೋಪಿಸಿದ್ದಾರೆ. ಹಿಂದೂ ಯುವತಿಯರನ್ನು ಪ್ರೀತಿಯ ಮೂಲಕ ತಮ್ಮ ಬಲೆಗೆ ಹಾಕಿಕೊಂಡು, ಮದುವೆಯಾಗುವ ಮೂಲಕ ಮತಾಂತರ ಮಾಡಿ ಅವರನ್ನು ಹಿಂದೂ ಧರ್ಮದಿಂದ ಅನ್ಯಮತಕ್ಕೆ ಮತಾಂತರ ಮಾಡುವ ದುರುದ್ದೇಶ ಹೊಂದಿದ್ದು, ಇದೊಂದು ವ್ಯವಸ್ಥಿತ 'ಲವ್ ಜಿಹಾದ್' ಷಡ್ಯಂತ್ರ ಎಂದು ಆರೋಪಿಸಿದ್ದಾರೆ.

 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!