ಅದೆಷ್ಟು ಸಾಕ್ಷಿ ಸಮೇತ ಮಸಾಜ್ ಪಾರ್ಲರ್ ನ ಕರಾಳ ಮುಖ ಬಯಲಿಗೆ ತಂದರೂ ಇನ್ನೂ ನಡೆಯುತ್ತಿದೆ ಅಕ್ರಮ ಮಸಾಜ್ ಪಾರ್ಲರ್ ದಂಧೆ
ಬೇಲೀನೆ ಎದ್ದು ಹೊಲ ಮೇಯುತ್ತಿದೆಯೇ..? ಅಕ್ರಮಕ್ಕೆ ತಡೆ ಹಾಕುವವರೇ ಶಾಮೀಲಾಗಿದ್ದಾರೆಯೇ!?

ಮಂಗಳೂರಿನಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ನಮ್ಮ ಮಾಧ್ಯಮ ದಕ್ಷವಾಗಿ ವರದಿ ಮಾಡುತ್ತಲೇ ಇದೆ. ಇಂತಹ ಅಕ್ರಮಗಳಲ್ಲಿ ಒಂದಾದ ಮಸಾಜ್ ಪಾರ್ಲರ್ ನ ಅಕ್ರಮ ಚಟುವಟಿಕೆಯ ಬಗ್ಗೆ ಹಲವಾರು ಪಾರ್ಲರ್ ಗಳ ಬಗ್ಗೆ ಸಾಕ್ಷಿ ಸಮೇತವಾಗಿ ನಾವು ವರದಿ ಮಾಡಿದ್ದೆವು... ಆದರೆ, ಇಲ್ಲಿಯವರೆಗೆ ಯಾವ ಮಸಾಜ್ ಪಾರ್ಲರ್ ಕೂಡ ಮುಚ್ಚಿಲ್ಲ ಎಂಬುದು ಆಶ್ಚರ್ಯದ ವಿಚಾರವಾಗಿದೆ.

ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಮೌನದ ನಡೆ, ಸಾರ್ವಜನಿಕರಲ್ಲಿ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. 

ಈ ಹಿಂದೆ ಕಾಂಗ್ರೆಸ್ ಪಕ್ಷದ ಮೇಯರ್ ಆಗಿದ್ದ ಕವಿತಾ ಸನೀಲ್ ಅವರು ಇಂತಹ ಮಸಾಜ್ ಪಾರ್ಲರ್ ಗಳಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂದು ತಿಳಿದು, ತಾವೇ ಅಂತಹ ಮಸಾಜ್ ಪಾರ್ಲರ್ ಗಳಿಗೆ ದಾಳಿ ಮಾಡಿ ಎಲ್ಲಾ ಮಸಾಜ್ ಪಾರ್ಲರ್ ಅಕ್ರಮಕ್ಕೆ ಕಡಿವಾಣ ಹಾಕಿ, ಮಂಗಳೂರಿನ ಹೆಮ್ಮಯ ಮೇಯರ್ ಆಗಿ ಗುರುತಿಸಿಕೊಂಡಿದ್ದರು.

ಆದರೆ, ಅವರ ಮೇಯರ್ ಅವಧಿ ಮುಗಿದಂತೆಯೇ ಈ ಅಕ್ರಮ ಚಟುವಟಿಕೆ ಮತ್ತೆ ಆರಂಭವಾಗಿ, ಇಂದಿನವರೆಗೂ ರಾಜಾರೋಷಾಗಿ ನಡೆಯುತ್ತಿದೆ. ಅಕ್ರಮವನ್ನು ಮಟ್ಟ ಹಾಕುವ ಪೊಲೀಸ್ ಇಲಾಖೆ, ಸರಕಾರದ ಅಧಿಕಾರಿಗಳು ಇಂತಹ ಅಕ್ರಮಕ್ಕೆ ದಾಳಿ ನಡೆಸಲು ಯಾಕೆ ಹಿಂದೇಟು ಹಾಕುತ್ತಿದ್ದಾರೆ ಎಂಬ ಸುದ್ದಿ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ಇಂತಹ ಅಕ್ರಮಗಳಿಗೆ ಬ್ರೇಕ್ ಯಾವಾಗ ಎನ್ನುವುದು ಯಕ್ಷಪ್ರಶ್ನೆಯಾಗಿ ಉಳಿದಿದೆ.

https://newsdaksha.online/mangalore/2369

https://newsdaksha.online/mangalore/2175

https://newsdaksha.online/crime/2332

https://newsdaksha.online/mangalore/2233

 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!