ಮಂಗಳೂರು ವಿಮಾನ ನಿಲ್ದಾಣದಲ್ಲಿ 1.46ಕೋಟಿ ಮೌಲ್ಯದ ಅಕ್ರಮ ಚಿನ್ನ ಸಾಗಾಟ ಪತ್ತೆ...
ಮಂಗಳೂರು

ದುಬೈನಿಂದ ಅಕ್ಟೋಬರ್ 22 ರಿಂದ 31 ರ ಅವಧಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ 24 ಕ್ಯಾರೆಟ್ ಪರಿಶುದ್ಧತೆಯ 1,46,87,410 ರೂ. ಮೌಲ್ಯದ 2,870 ಗ್ರಾಂ ಚಿನ್ನವನ್ನು ಕಷ್ಟಮ್ಸ್ ಅಧಿಕಾರಿಗಳು ಮಂಗಳೂರು ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದಾರೆ...

ಆರು ಮಂದಿ ಪ್ರಯಾಣಿಕರು ಚಿನ್ನವನ್ನು ಪೇಸ್ಟ್, ಪೌಡರ್ ರೂಪಕ್ಕೆ ಪರಿವರ್ತಿಸಿ ಬನಿಯನ್, ಜೀನ್ಸ್ ಪ್ಯಾಂಟ್, ಶೂ ಗಳಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದರು ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ...

ಅಕ್ಟೋಬರ್ 8 ರಿಂದ 21ರ ನಡುವೆ ವಿವಿಧ ಪ್ರಕರಣಗಳ ಪೈಕಿ 5 ಮಂದಿ ಪ್ರಯಾಣಿಕರು ದುಬೈನಿಂದ ಸಾಗಾಟ ಮಾಡುತ್ತಿದ್ದ 1.59 ಕೋಟಿ ರೂಪಾಯಿ ಮೌಲ್ಯದ ಹಾಗೂ ಅಕ್ಟೋಬರ್ 6ರಂದು 38.53 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಚಿನ್ನವನ್ನು ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ...


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!